ಅನುಭವಮುದ್ರೆ

ವೀರಶೈವಸಿದ್ಧಾಂತವನ್ನು ಸಾಂಗತ್ಯದಲ್ಲಿ ನಿರೂಪಿಸುವ ಕನ್ನಡಗ್ರಂಥ. ಬರೆದ ಕವಿ ಶಾಂತಮಲ್ಲ (ಸುಮಾರು 1650). ಸಿದ್ಧಲಿಂಗೇಶನ ಪರಂಪರೆಗೆ ಸೇರಿದವನೆಂದು ತೋರುತ್ತದೆ. ಇದರಲ್ಲಿ 29 ಸ್ಥಲಗಳಿವೆ. ಈ ಗ್ರಂಥವನ್ನು ಅನಾದಿ ಪ್ರಭುದೇವರು ಪ್ರಭುಸ್ವಾಮಿ ಎಂಬ ಶಿಷ್ಯನಿಗೆ ಉಪದೇಶಿಸಿದಂತೆ ಕವಿ ಹೇಳಿದ್ದಾನೆ.					
	
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ